President's Message - HAA Convention 2026

ಅಧ್ಯಕ್ಷರ ಸಂದೇಶ

President's Message

Muralidhara Kaje

President, Havyaka Association of the Americas
2025-2026

ದಕ್ಷಿಣೋತ್ತರ ಅಮೆರಿಕಾದ ಎಲ್ಲಾ ಹವ್ಯಕ ಬಂಧುಗೊಕ್ಕೂ ಎನ್ನ ಸಾದರ ನಮಸ್ಕಾರಂಗ 🙏.

2025-26ರ ಅವಧಿಗೆ ನಮ್ಮ ಹವ್ಯಕರ ಒಕ್ಕೂಟ "Havyaka Association of the Americas (HAA)” ಯ ಅಧ್ಯಕ್ಷನಾಗಿ ಹವ್ಯಕ ಸಮಾಜಕ್ಕೆ ಸೇವೆ ಸಲ್ಲಿಸುವ ಅವಕಾಶ ನೀಡಿರುವ ನಿಮಗೆಲ್ಲರಿಗೂ ಹಾಗೂ ಪರಮಾತ್ಮನಿಗೂ ನಾನು ಕೃತಜ್ಞನು.

ನಮ್ಮ ಒಕ್ಕೂಟದ 21ನೆಯ ದ್ವೈವಾರ್ಷಿಕ ಸಮಾವೇಶ 2026ರ ಜುಲೈ 3 ರಿಂದ 5 ರವರೆಗೆ ಶಿಕಾಗೋಲ್ಲಿ ನಡೆಸುವ ಕಾರ್ಯಕಾರೀ ಸಮಿತಿಯ ನಿರ್ಧಾರ ನಿಮಗೆಲ್ಲರಿಗೂ ಈಗಾಗಲೇ ತಿಳಿದಿರಬಹುದು.

“ಹವ್ಯಕ ಸಮಾಗಮ” ಎಂಬ ಥೀಮ್‌ ಮತ್ತು “ನಮ್ಮ ಜನ, ನಮ್ಮತನ, ನಮ್ಮ ಧನ, ನಮ್ಮ ಋಣ” ಎಂಬ ಧ್ಯೇಯವಾಕ್ಯದಂತೆ ಅಮೆರಿಕಾದ್ಯಂತ ಇರುವ ಹವ್ಯಕರನ್ನೆಲ್ಲ ಒಗ್ಗೂಡಿಸುವ ಮತ್ತು ನಮ್ಮ ಬಾಂಧವ್ಯ, ಮೌಲ್ಯಗಳು ಮತ್ತು ಪರಂಪರೆಯನ್ನು ಗೌರವಿಸುವ ಉದ್ದೇಶವಿಟ್ಟುಕೊಂಡು ನಮ್ಮ ಈ ಸಮಾವೇಶ ನಡೆಯಲಿದೆ.

ಜುಲೈ 3, ಶುಕ್ರವಾರ ಬೆಳಗ್ಗೆ, ಅಮೆರಿಕಾದಲ್ಲಿ ನೆಲೆಸಿರುವ ಹವ್ಯಕ ಋತ್ವಿಜರಿಂದ ನಡೆಯುವ ಹೋಮ–ಪ್ರಾರ್ಥನೆಗಳಿಂದ ಸಮಾವೇಶ ಆರಂಭವಾಗಿ, ಅದ್ದೂರಿಯ ದೇವರ ಮೆರವಣಿಗೆಯೊಂದಿಗೆ ಮುಂದುವರಿಯಲಿದೆ. ಮುಂದಿನ ಎರಡು ದಿನಗಳಲ್ಲಿ (ಜುಲೈ 3–4) ಅಮೆರಿಕ ಮತ್ತು ಕೆನಡಾದ ಹವ್ಯಕ ಪ್ರತಿಭೆಗಳಿಂದ ಯಕ್ಷಗಾನ, ನೃತ್ಯನಾಟಕ, ಸಂಗೀತ, ನೃತ್ಯ, ವಿಚಾರ ಗೋಷ್ಠಿ ಇತ್ಯಾದಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಮ್ಮ ಯುವಪೀಳಿಗೆಯನ್ನು ಕೂಟದ ಚಟುವಟಿಕೆಗಳಲ್ಲಿ ಹಾಗೂ ಮುಂಬರುವ ಸಮಾವೇಶದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಉತ್ತೇಜಿಸುವ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುತ್ತಿದೆ.

ಜುಲೈ 5ನೇ ಭಾನುವಾರ ನಮ್ಮ ಕೂಟದ ಸರ್ವಸದಸ್ಯ ಸಭೆ (ಜನರಲ್ ಬಾಡಿ ಮೀಟಿಂಗ್) ಜರಗಲಿದೆ.

ಈ ಸಮಾವೇಶಕ್ಕೆ ತಾವೆಲ್ಲರೂ ತಮ್ಮ ಬಂಧು ಮಿತ್ರರೊಡಗೂಡಿ ಬಂದು ಚಂದಗಾಣಿಸಿಕೊಡಬೇಕಾಗಿ ಆತ್ಮೀಯವಾಗಿ ಆಹ್ವಾನಿಸುತ್ತಿದ್ದೇನೆ. ಕಾರ್ಯಕ್ರಮಗಳನ್ನು ತಮಗೆಲ್ಲರಿಗೂ ಇಷ್ಟವಾಗುವಂತೆ ನಡೆಸಿಕೊಡಬೆಂಬುದು ನಮ್ಮ ಆಶಯ - ಹಾಗಾಗಿ ಪ್ರತಿಬಾರಿಯಂತೆಯೇ ಈ ಬಾರಿಯೂ ಎಲ್ಲರೂ ತನು-ಮನ-ಧನ ಸಹಾಯಗಳನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕೇಳಿಕೊಳ್ಳುತ್ತೇನೆ.

ನಮಸ್ಕಾರ, ಧನ್ಯವಾದಗಳು 🙏

My heartfelt greetings to all Havyaka families across the Americas.

I am deeply grateful to all of you and to the Almighty for giving me the opportunity to serve our Havyaka community in the Western Hemisphere as the President of the Havyaka Association of the Americas (HAA) for the term 2025–26.

As you may already know, our Executive Committee has decided to host the 21st Biennial Havyaka Convention in Chicago from July 3rd to 5th, 2026.

With the theme “Havyaka Samagama” and the guiding motto “Namma Jana, Namma Thana, Namma Dhana, Namma Runa” — Our People, Our Culture, Our Wealth, Our Gratitude/Debt to our Motherland, this convention is being organized to unite Havyakas from across the Americas and to celebrate our shared bonds, values, heritage and traditions.

The convention will commence on Friday morning, July 3rd, with sacred Homa and prayers conducted by Havyaka priests residing in the United States, followed by a grand Deity Procession marking the official inauguration.

Over the following two days (July 3–4), the event will feature a variety of cultural programs showcasing the talents of Havyakas from the U.S. and Canada — including Yakshagana, dance dramas, music, dance, panel discussions, and more.

Several special sessions will also be organized to encourage active participation from our younger generation.

On Sunday, July 5th, the convention will conclude with the General Body Meeting of our Association.

I cordially and lovingly invite you all to attend this grand convention along with your family and friends.

It is our sincere wish to organize programs that will appeal to everyone and bring our community even closer.

As always, I request your wholehearted support — through your time, effort, and contributions — to help make this convention a great success.

Join us in Chicago to celebrate our people, culture, and community spirit — where every Havyaka heart beats as one!

Thank you and Namaskara 🙏