Short story competition
ಅಮೇರಿಕಾ ಹವ್ಯಕರ ಒಕ್ಕೂಟದ (HAA) 20 ನೇ ಸಮ್ಮೇಳನವು ಜುಲೈ 5-6 ಕ್ಕೆ ಫಿಲಡೆಲ್ಫಿಯಾ ಅಲ್ಲಿ ಜರುಗಲಿದೆ. ಸಮ್ಮೇಳನದ ಸವಿನೆನಪಿಗಾಗಿ ಈ ಸಂದರ್ಭದಲ್ಲಿ ಸ್ಮರಣ ಸಂಚಿಕೆ – “ಹವ್ಯಸಿರಿ 2024”ಯನ್ನು ಹೊರತರಲಾಗುವುದು. ಈ ಸಂದರ್ಭದಲ್ಲಿ ವಿಶ್ವದೆಲ್ಲೆಡೆ ಇರುವ ಹವ್ಯಕ ಬರಹಗಾರರಿಗಾಗಿ ಸ್ಮರಣ ಸಂಚಿಕೆ ಸಮಿತಿ “ಸಣ್ಣ ಕಥೆ ಸ್ಪರ್ಧೆ”ಯನ್ನು ಹಮ್ಮಿಕೊಂಡಿದೆ. ಬಹುಮಾನಿತ ಕಥೆಗಳನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತದೆ. ವಿಜೇತರನ್ನು ಸಮ್ಮೇಳನದ ಸಂದರ್ಭದಲ್ಲಿ ಘೋಷಿಸಲಾಗುವುದು.
ಸ್ಪರ್ಧೆಯ ನಿಯಮಗಳು ಈ ಕೆಳಗಿನಂತಿವೆ:
- ಕಥೆಯನ್ನು ಕಳುಹಿಸಲು ಕೊನೆಯ ದಿನಾಂಕ February 10, 2024.
- ಕಥೆಯು ಕನ್ನಡ, ಹವಿಗನ್ನಡ ಇಲ್ಲವೆ ಇಂಗ್ಲೀಷ್ ನಲ್ಲಿರಬಹುದು.
- ಕಥೆ ಆರು ಪುಟ ಮೀರಬಾರದು.
- ಕಥೆ ಸ್ವಂತ ರಚನೆಯಾಗಿರಬೇಕು ಹಾಗೂ ಬೇರೆ ಎಲ್ಲೂ ಪ್ರಕಟವಾಗಿರಬಾರದು.
- ಅನುವಾದಿತ ಕಥೆಗೆ ಸ್ಪರ್ಧೆಯಲ್ಲಿ ಅವಕಾಶವಿಲ್ಲ.
- ಸ್ಪರ್ಧೆಗೆ ಕಳುಹಿಸಿದ ಕಥೆಯನ್ನು ಹವ್ಯಕ ಸಮ್ಮೇಳನದ ಸ್ಮರಣ ಸಂಚಿಕೆ ಪ್ರಕಟಣೆಯಾಗುವವರೆಗೆ ಬೇರೆಲ್ಲೂ (ಬ್ಲಾಗ್, ಸೋಷಿಯಲ್ ಮೀಡಿಯಾ ಸೇರಿದಂತೆ) ಪ್ರಕಟಿಸುವಂತಿಲ್ಲ.
- ಕಥೆಯನ್ನು ಯೂನಿಕೋಡ್ನಲ್ಲಿ, MS-Word/ google docನಲ್ಲಿ ಫಾಂಟ್ ಸೈಜ಼್ 12 ಬಳಸಿ ಕಳುಹಿಸತಕ್ಕದ್ದು, ಯಾವುದೇ ಕಾರಣಕ್ಕೂ ಹಸ್ತಪ್ರತಿಗಳನ್ನು ಸ್ವೀಕರಿಸಲಾಗುವುದಿಲ್ಲ.
- ಸ್ಪರ್ಧೆಗೆ ಒಂದಕ್ಕಿಂತ ಹೆಚ್ಚು ಕಥೆಯನ್ನು ಕಳುಹಿಸುವ ಹಾಗಿಲ್ಲ.
- ಕಥೆಯೊಂದಿಗೆ ನಿಮ್ಮ ಕಿರುಪರಿಚಯ, ಭಾವಚಿತ್ರ, ಈ-ಮೇಲ್ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ದಯವಿಟ್ಟು ಕಳುಹಿಸತಕ್ಕದ್ದು.
- ನಿಮ್ಮ ಕಥೆಯನ್ನು articles@havyak.org ಗೆ ಕಳಿಸಿ.
- ತೀರ್ಪುಗಾರರ ನಿರ್ಧಾರವೇ ಅಂತಿಮ. ಸ್ಪರ್ಧೆಗೆ ಸಲ್ಲಿಸಿದ ಯಾವುದೇ ಕಥೆಯನ್ನು ಸ್ಮರಣ ಸಂಚಿಕೆಯಲ್ಲಿ ಪ್ರಕಟಿಸುವ ಅಥವಾ ಪ್ರಕಟಿಸದೆ ಇರುವ ತೀರ್ಮಾನ ಸ್ಮರಣ ಸಂಚಿಕೆ ಸಂಪಾದಕ ಸಮಿತಿಯದ್ದಾಗಿರುತ್ತದೆ.
– ಹವ್ಯಸಿರಿ ಸಮಿತಿ – 2024
The 20th Biennial Convention of Havyaka Association of Americas (HAA) will be held in Philadelphia on July 5th-6th, 2024. To mark this occasion, HAA is planning to publish a souvenir – “Havyasiri 2024″. HAA souvenir team is conducting a short story competition for Havyaka writers across the globe. Prize winning short stories will be published in the souvenir and winners will be announced during the convention.
Competition rules are as follows:
- Last date to submit a short story is February 10, 2024
- Short story can be written either in Kannada/Havigannada/ English
- Short story should be your original creation and it shouldn’t have been published before
- Submitted short story should not be published anywhere else (including blogs and social media) before the souvenir gets published
- Story length should be limited to 6 pages or less
- Translated short stories will not be considered for the competition
- Short story should be in Unicode, MS-Word/ google doc Font size 12 and hard copies will not be accepted
- Please send your short story to articles@havyak.org
- A person can send only one short story
- Please send a brief introduction about yourself, address, email id, and phone number along with your short story, and send your picture attached to the email
- Judge’s decision is final. Team Havyasiri 2024 reserves the right to select the stories to publish in the magazine
-Team Havyasiri -2024